ಮಂಗಳವಾರ, ಜನವರಿ 14, 2020

ಕನ್ನಡಮ್ಮನ ಸ್ವರಗಳು
_______________________________________
ಅ-- ಮ್ಮ ಕನ್ನಡನಾಡಿನ ಕಂದ ನಾನು
ಆ--ಕನ್ನಡ ಭಾಷೆಯ ನುಡಿಯ ನುಡಿಸಲು ನೀನು 
ಇ--ದು ಸ್ವರ್ಗದಾಮೃತವೆಂದರಿತೆನು ನಾನು 
ಈ--ಡೇರಲಿ ಕನ್ನಡಿಗರೆಲ್ಲರ ಸಂಕಲ್ಪ 
ಉ--ಳಿಯಲಿ ಕನ್ನಡಾ ಚಂದ್ರಾರ್ಕರಿರುವ ತನಕ
ಊ--ರೂರಲಿ ಮೊಳಗಲಿ ಕನ್ನಡ ಜಯಭೇರಿ 
ಋ--ಷಿಸಂತರ ವಿಜ್ಞಾನಿಗಳುದಯದಲಿ
ಎ--ಲ್ಲೆಯ ಮೀರಿ ಕನ್ನಡ ಬೆಳೆಯಲಿ
ಏ--ರುತ್ತೇರುತ ಬಾನಂಗಳದಲಿ ಕನ್ನಡ ಬಾವುಟ ಹಾರಾಡಲಿ
ಐ--ಕ್ಯತೆಯಿಂದಿರುವೆವು ನಾವೆಂದೆಂದಿಗೂ

ಒ-- ಡವುಟ್ಟಿದವರಾಗಿರುವೆವಿಂದಿಗು ನಾವೆಂದೆಂದಿಗೂ
ಓ-- ಹೋ!ಕನ್ನಡ ! ಆಹಾ!ಸವಿಗನ್ನಡದ
ಔ-- ನ್ನತ್ಯ ವನೇ ಕಾಣುವೆವು ತೋರುವೆವು
ಅಂ-ದು ಇಂದು ಎಂದೆಂದಿಗೂ ಕನ್ನಡಕ್ಕಾಗಿ ದುಡಿಯುವೆವು
ಆಃ-ಆ ಕನ್ನಡ ನಾಡನುಡಿಯ ಕಟ್ಟುತಲಿರುವೆವು ನಾವೆಂದೆಂ           ದಿಗಮ್ಮ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Vidyagama