ಆಧುನಿಕ ವಚನಗಳು
ಅತಿಯಾಸೆ ಪಡುವಲ್ಲಿ
ಕುರುಡಾಗುವುದು ಲೇಸುಕಾಣಯ್ಯಾ
ಚಾಡಿ ಮಾತು ಕೇಳುವಲ್ಲಿ
ಕಿವುಡಾಗುವುದು ಲೇಸುಕಾಣಯ್ಯಾ
ಅನ್ಯರ ಹಂಗಿಸುವಲ್ಲಿ
ಮೂಕನಾಗುವುದೇ ಲೇಸುಕಾಣಯ್ಯಾ
ಹೀನ ಕೃತ್ಯ ಮಾಡುವಲ್ಲಿ
ಹೆಳವನಾಗುವುದೇ ಲೇಸುಕಾಣಯ್ಯಾ
ಬಂಟನಹಳ್ಳಿ ಶ್ರೀ ಬಸವೇಶ್ವರಾ
ಎನ್ನ ಕಾಯ ನಿನ್ನದಾದಲ್ಲಿ ಕಾಯಂಗಳನ್ನು ನೀನೇ ಕಾಯೋ ತಂದೆ ೧
ಮನುಜನ ಮಾತುಗಳಾ ಪ್ರಾಣಿಗಳರಿವವು
ಪ್ರಾಣಿಗಳ ಮಾತಾ ಮನುಜನರಿವನೆ ?
ಮನುಜನ ಮಾತುಗಳಾ ಪಕ್ಷಿಗಳರಿವವು
ಪಕ್ಷಿಗಳ ಮಾತಾ ಮನುಜನರಿವನೆ ?
ಮನುಜನ ಮಾತುಗಳಾ ಜಡ ಚೈತನ್ಯಗಳರಿವವೆಂಬರು
ಜಡ ಚೈತನ್ಯಗಳ ಮಾತಾ ಮನುಜನರಿವನೆ ?
ಎಲ್ಲರಲ್ಲಿ ನಾ ಬುದ್ಧಿವಂತನೆಂಬುದು ನಗೆಗಡಲು
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ಪ್ರಾಣಿ ಪಕ್ಷಿ
ಜಡ ಚೈತನ್ಯಗಳ ಮಾತನರಿತಳಿಯದೆ ಬಾಳುವಂತೆ ದಯಮಾಡೋ. ೨
ದೇಹಸಾಮ್ರಾಜ್ಯಕ್ಕೆ ದೊರೆ,'ಮನಸ್ಸು 'ಕೇಳಿ ರಯ್ಯ
ಆ ದೇಹಸಾಮ್ರಾಜ್ಯಕ್ಕೆ ನವದ್ವಾರಗಳಯ್ಯ
ಆ ದೊರೆಗೆ ಪಂಚದಂಡಾದೀಶ್ವರಯ್ಯಾ
ಅಂತರ್ಚಕ್ಷುವೆಂಬ ಮಂತ್ರಿಯ ಸುಸಲಹೆಯಿರಲು
ಅದ ವರ್ಜಿಸಿ,ಷಟ್ಕುದುರೆಗಳೇರಿ,ಆ ದೊರೆಯ ವಿಕೃತದಾಟದ ಪರಿಯಲಿ
ನವ ದ್ವಾರದಿ ರೋಗವೆಂಬ ಶತ್ರುಗಳು ದಂಡೆತ್ತಿಬರುತ್ತಿರಲು
ಪಂಚ ದಂಡಾದೀಶ್ವರರು ದಂಡವಯ್ಯಾಗ
ಮೂಳೆ ಮಾಂಸದ ಕೋಟೆ ಜರ್ಝರಿತವಾಗಿ
ಬಿಳಿ ರಕ್ತದ ಸೈನಿಕರು ಹತರಾಗಿ,
ದೇಹಸಾಮ್ರಾಜ್ಯದಿಂದ ದೊರೆಯು ಆತ್ಮರಾಜಧಾನಿ ರಕ್ಷಣೆಗಾಗಿ ಅಲ್ಲಿ ಇಲ್ಲಿ ಬೇಡುತ್ತಿರಲು, ಬೇಡಿ ಬೇಡಿ, ಸೋತು ಪ್ರಾಣ ಹತ್ಯೆಯಾಗುವ ಮುನ್ನ ತಂದೆ ಭಂಟನಳ್ಳಿ ಶ್ರೀ ಬಸವೇಶ್ವರಾ ನೀನೆತ್ತಿ ನಿಜದರಿವು ಮೂಡಿಸಾ. ೩
ನಾನೊಬ್ಬ ಶಿಕ್ಷಕ,ಪವಿತ್ರವೃತ್ತಿಯಲ್ಲಿರುವನಯ್ಯಾ
ಸರಿಯಾದ ವೇಳೆಗೆ ಶಾಲೆಯಲ್ಲಿರುವೆನಯ್ಯಾ
ವಿಶೇಷ ತರಗತಿಯ ತೆಗೆದುಕೊಳ್ಳುವೆನಯ್ಯಾ
ಓದಿನ ಮನೆಯಲಿಯೂ ಓದಿಸುವೆನಯ್ಯಾ
ಪಠ್ಯವ ಮುಗಿಸಿ ಪುನರಾವರ್ತನೆ ಮಾಡುವೆನಯ್ಯಾ
ಕಲಿಯ ಖಾತ್ರಿಯ ಮಕ್ಕಳಿಂದ ಪಡೆಯುವೆನಯ್ಯಾ
ಮಕ್ಕಳ ಸುರಕ್ಷತೆ ,ಕಲಿಕೆಗಾದ್ಯತೆ ನೀಡುವೆನಯ್ಯಾ
ಮಕ್ಕಳ ಸಂತಸ ಕಲಿಕೆಯಲಿ ಶಿಕ್ಷೆಯ ಮರೆತಿರುವೆನಯ್ಯಾ
ಪಠ್ಯೇತರ,ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಥಾನವ ಕಲ್ಪಿಸುವೆನಯ್ಯಾ
ನಾಡು ನುಡಿ,ದೇಶಾಭಿಮಾನವ ಬಿತ್ತುವೆನಯ್ಯಾ
ಸಾಮಾಜಿಕ ಮೌಲ್ಯ ,ಆಧ್ಯಾತ್ಮಿಕತೆಗಿಂಬಿಡುವೆನಯ್ಯಾ
ಪರೀಕ್ಷೆ ,ಮೌಲ್ಯಮಾಪನ ಕಾರ್ಯವ ಮುಗಿಸುವೆನಯ್ಯಾ
ತರಬೇತಿ ,ಚುನಾವಣಾ ಕರ್ತವ್ಯಕ್ಕೆ ಹಾಜರಾಗುವೆನಯ್ಯಾ
ಇಂತಿ ಹಲವು ಶೈಕ್ಷಣಿಕ ಚುಟುವಟಿಕೆಗೆ ಕುಂದುಂಟಾಗದೆ ನಡೆವೆನಯ್ಯಾ
ಬಯಸಿದ ಸ್ಥಳಕೆ ವರ್ಗಾವಣೆ ಕಲ್ಪಿಸು ದೇವಾ !
ಕಲ್ಪಿಸಿದೆಡೆಯೂ ಕುಂದುಂಟಾದರೆ
ಎನ್ನ ವೃತ್ತಿಯ ಬುತ್ತಿಯನು ನಿನ್ನದಾಗಿಸಿಕೊ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
೪
ಮುನಿವ ಮುಖಕ್ಕಿಂತ
ಮುದ್ದು ಮುಖವು ಲೇಸಯ್ಯಾ
ಮುನಿಯುವ ಮುಖಕ್ಕೆ
ಸಂಬಂಧಗಳನ್ನು ಗಳಿಸಲಾಗದಯ್ಯಾ
ಮುದ್ದು ಮುಖಕ್ಕಿರುವ
ಸಂಬಂಧಗಳನು ಎಣಿಸಲಾಗದಯ್ಯ
ಮುನಿಯುವ ಮುಖವ ಮೆರೆಸದಿರಾ
ಮುದ್ದು ಮುಖ ಮರೆಸದಿರಾ
ಮುನಿಯುವ ಮುಖಕ್ಕೆ
ಮುದ್ದು ಮುಖವನೇ ಮದ್ದಾಗಿಸಯ್ಯಾ
ಎನ್ನ ಮುಖದಲಿ ಮುನಿವೆಂದೂ ನೀ ತೋರದಿರಾ,
ನಾ ತೋರಿದರೆ ಆ ಮುಖವನೊಯ್ದ
ಮೋರಿಯೊಳಗಿಕ್ಕಾತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
೫
ಅಹಂ ಪಡುವ ದೊಡ್ಡವರಿಗಿಂತ
ಅಹಂ ಪಡದ ದಡ್ಡನನ್ನಾಗಿಸಯ್ಯ
ಕೇಳಿಯೂ ಕೊಡದ ಶ್ರೀಮಂತರಿಗಿಂತ
ಕೇಳದೆ ಕೊಡುವ ಬಡವನನ್ನಾಗಿಸಯ್ಯಾ
ಉದ್ಧರಿಯವನಾಗುವುದಕ್ಕಿಂತ
ಉದ್ಧರಿಸುವನಾಗಿಸಯ್ಯಾ
ಉದ್ದವಾಗಿ ಬೆಳೆಯುವುದಕ್ಕಿಂತ ಉದಾರಿಯಾಗಿ ಬೆಳೆಸಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೬
ದೃಷ್ಟಿಯ ಹರಿಸಯ್ಯಾ ಒಳಿತಿನ ಕಡೆಗೆ
ಕೆಟ್ಟದ್ದನ್ನು ನೋಡುವ ಮುನ್ನ
ನುಡಿಯ ನುಡಿಸಯ್ಯ ಶುಭ ನುಡಿಯೆಡೆಗೆ
ಅಶುಭ ನುಡಿಯ ನುಡಿಯುವ ಮುನ್ನ
ಮನಸ ನಿಲ್ಲಿಸಯ್ಯಾ ಏಕಾಗ್ರತೆಯೆಡೆಗೆ
ಚಂಚಲತೆಗೊಳಗಾಗುವ ಮುನ್ನ
ಪ್ರಯತ್ನ ಮಾಡಿಸಯ್ಯಾ ಗೆಲುವಿನ ಕಡೆಗೆ
ಸೋಲನನುಭವಿಸುವ ಮುನ್ನ
ಮುಕ್ತಿ ಕರುಣಿಸಯ್ಯಾ ನಿನ್ನ ಕೈಲಾಸ ಗಿರಿಯೆಡೆಗೆ
ಅನ್ಯರಿಗೆ ಹಂಗಾಗುವ ಮುನ್ನ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೭
ನೆರಳ ಕೊಡುವ ಮರಗಳ ಹೆಚ್ಚು
ಕಡಿವರಯ್ಯಾ ದುರಾಸೆಗಾಗಿ
ಫಲವ ನೀಡಿವ ಹೊಲವ ಉತ್ತದೆ ಹೆಚ್ಚು
ಬಿಡುವರಯ್ಯಾ ನಿವೇಶನಕ್ಕಾಗಿ
ಮನೆಗಳ ಮೇಲೆ ಮನೆಗಳ ಹೆಚ್ಚು ಕಟ್ಟಿಸುವರಯ್ಯಾ
ಹಣದ ವ್ಯಾಮೋಹಕ್ಕಾಗಿ
ಮನಸ್ಸಿಲ್ಲದಾ ಮನಸ್ಸಿನಲಿ ನಿನ್ನ ಪೂಜಿಸುವನಯ್ಯಾ
ನನ್ನ ಸ್ವಾರ್ಥಕ್ಕಾಗಿ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ಈ ನನ್ನ ಮನದ ದುರಾಸೆಯಳಿಸಿ ನೀನಾಧೀನಗೊಳಿಸಯ್ಯಾ. ೮
ಬಗ್ಗಿ ಎದ್ದು ಕೆಲಸ ಮಾಡರು
ಸ್ವಲ್ಪದೂರ ನಡೆಯಲೊಲ್ಲರು
ರೋಗ ರುಜಿನಿಯು ಬೇಡವೆಂಬರು
ದಾನ ಧರ್ಮ ಕೆಲಸ ನಮಗೇಕೆಂಬರು
ಧನ ಕನಕಾದಿಗಳೆಮಗೆಮೆಂಬರು
ಕಷ್ಟಪಟ್ಟು ದುಡಿದು ತಿನ್ನುದ ಮರೆತರು
ಇಷ್ಟಪಟ್ಟಿದ್ದು ಬೇಕೇಬೇಕೆಂಬರು
ತಂದೆ ಬಂಟನಳ್ಳಿ ಶ್ರೀ ಬಸವೇಶ್ವರಾ
ನಿನ್ನ ಸನ್ನಿಧಾನಕ್ಕೆರಗದೆ ಸಂತಸ ನಿಧಿಯ ಕೇಳುವವರನೇನೆಂಬೆ ಹೇಳಾ ೯
ಬೀಗುತ ಬಾಳುವುದಕ್ಕಿಂತ
ಬಾಗುತ ಬಾಳುವುದನು ಕಲಿಸಯ್ಯಾ
ಬೇಡುತ ಬದುಕುವುದಕ್ಕಿಂತ
ಮಾಡುತ ಬದುಕುವುದನು ಬಲಿಸಯ್ಯಾ
ಅನ್ಯಾಯಗಳನು ನೋಡುವುದಕ್ಕಿಂತ
ತಿದ್ದುತ ಹೋಗುವುದನು ಅನುಕೂಲಿಸಯ್ಯಾ
ದೌರ್ಜನ್ಯಗಳನು ಕಾಣುವುದಕ್ಕಿಂತ
ತಡೆಗಟ್ಟುವುದನು ದಯಪಾಲಿಸಯ್ಯಾ
ಭ್ರಷ್ಟಾಚಾರವ ಮಾಡುವುದಕ್ಕಿಂತ
ನಿರ್ಮೂಲನೆ ಮಾಡುವುದ ಬೆಳಸಯ್ಯಾ
ಇಂತಿ ಹಲವು ಮಾಡಲು ಗಟ್ಟಿತನವ ಕರುಣಿಸಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ. ೧೦
ದುಡಿಮೆಗೆ ಸಮಯ ಮೀಸಲಿಡುವರಯ್ಯಾ
ಜೂಜಿಗೂ ಸಮಯ ಮೀಸಲಿಡುವರಯ್ಯಾ
ಮೋಜು ಮಸ್ತಿಗೆ ಸಮಯ ಮೀಸಲಿಡುವರಯ್ಯಾ
ಹುಟ್ಟು ಹಬ್ಬ,ಹರಿದಿನಕ್ಕೂ ಸಮಯಮೀಸಲಿಡುವರಯ್ಯಾ
ವಿರಾಮವಿರುವುದಕ್ಕೂ ಸಮಯ ಮೀಸಲಿಡುವರಯ್ಯ
ದುಷ್ಕೃತ್ಯಕಾರ್ಯಗಳಿಗೂ ಸಮಯ ಮೀಸಲಿಡುವರಯ್ಯ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರ 'ಆರೋಗ್ಯ ವೃದ್ಧಿ'ಗೆ ಯೋಗ ಧ್ಯಾನದಿ ನಿನ್ನ ನೆನೆಯಲು ಸಮಯ ಮೀಸಲಿಡುವವರತಿ ವಿರಳ ನೋಡಾ. ೧೧
ಊರು ಊರಿನವರೆಲ್ಲರೂ ಸೇರಿ
ಕುಳಿತು ಸಿನಿಮಾ ನೋಡುತ್ತಿದ್ದರಯ್ಯಾ
ಚಿತ್ರಮಂದಿರದಲ್ಲಿ
ಮೊದಮೊದಲು !
ಮನೆ ಮನೆಯವರೆಲ್ಲ ಸೇರಿ
ಕುಳಿತು ಸಿನಿಮಾ ಧಾರಾವಾಹಿ
ನೋಡುತ್ತಿರುವರಯ್ಯಾ ದೂರದರ್ಶನದಲ್ಲಿ
ಆ ಮೊದಲು !
ಒಬ್ಬೊಬ್ಬರೇ ಕುಳಿತು ಸಿನಿಮಾ ಧಾರಾವಾಹಿ ಯೂಟ್ಯೂಬ್ ಫೇಸ್ ಬುಕ್, ಶೆರ್ಚಾಟ್,ಟಿಕ್ ಟಾಕ್,ಇತ್ಯಾದಿ ಇತ್ಯಾದಿ ನೋಡುತ್ತಿರುವರಯ್ಯಾ ಮೊಬೆಲ್ ನಲ್ಲಿ
ಈಗೀಗ !
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
ಜಗದ ಮುಂದಿನ ಕಾಲದ ಕಟ್ಟಳೆಯನರುಹಾ
ಇಂದು !! ೧೨
ಎಲ್ಲರೂ ಹೇಳುವರಯ್ಯಾ
"ಇಲ್ಲಿರುವುದು ಸುಮ್ಮನೆ
ಅಲ್ಲಿರುವುದು ನಮ್ಮನೆ"
ಆ ಮನೆ ನೋಡಿರುವರಾರು ? ಆ ಮನೆಗೆ ಹೋಗಿಬಂದವರಾರೆಂದಡೆ ?
ಕಥೆಯ ಹೇಳುವರಯ್ಯಾ
ಇಲ್ಲಿ ಇರದವನಲ್ಲಿರುವನೇ
ಅಲ್ಲಿರುವವನು ಮತ್ತೆಲ್ಲಿಗೆ ಹೋಗುವನು ಹೇಳಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೧೩
ವಚನಗಳೆಂದರೆ ನೆನೆಯುವುದೆನ್ನ ಮನವು
ಬಸವಣ್ಣನನ್ನಾದಿಯಾಗಿ,
ಕೀರ್ತನೆಗಳೆಂದರೆ ನೆನೆಯುವುದೆನ್ನ ಮನವು
ಕನಕದಾಸರಾದಿಯಾಗಿ,
ತ್ರಿಪದಿಗಳೆಂದರೆ ನೆನೆಯುವುದೆನ್ನ ಮನವು
ಸರ್ವಜ್ಞ ನನ್ನ ಆದಿಯಾಗಿ,
ದೈವವೆಂದರೆ ನೆನೆಯುವುದೆನ್ನ ಮನವು
ನಿನ್ನನಾದಿಯಾಗಿ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
ಎಲ್ಲದನು ನೆನೆಯುವ, , ಎಲ್ಲರೊಂದಿಗೆ ಜೀವನ ನಡೆಸುವ,ಎಲ್ಲರೂ ನೆನೆಯುವ, ವರವ ಕರುಣಿಸೋ ೧೪
ಎಲೆಗಳಿಗುಂಟು ಹಸಿರು ನೋಡಯ್ಯಾ
ಹೆಣ್ಣಿಗುಂಟು ಬಸಿರು ಕೇಳಯ್ಯಾ
ಜೀವಿಗಳಿಗುಂಟು ಉಸಿರು ತಿಳಿಯಯ್ಯಾ
ಪ್ರತಿ ವಸ್ತುವಿಗುಂಟು ಹೆಸರು
ಇವುಗಳಿರುವ ತನಕ ಜಗದಾಟನಿಲ್ಲದು ಕಾಣಾ,
ಜಗದ್ಸೂತ್ರಧಾರಿ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ರಕ್ಷಿಸೋ ಜಗವನನವರತ. ೧೫
ಡಾಕ್ಟರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು !
ಇಂಜಿನಿಯರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು !
ಕೊನೆಗೆ ಸರ್ಕಾರಿ ನೌಕರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು
ಜನಸೇವೆಯೇ ಜನಾರ್ದನ ಸೇವೆಂದು
ಸಮಾಜ ಸೇವಕನಾಗೆಂದು ಮಕ್ಕಳನು
ಓದಿಸುವರೊಬ್ಬರನೂ ಕಾಣೆನಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ.೧೬
ಕಾರಿನ ಪ್ರಯಾಣ ಸುಖಕರವೆನ್ನುವರು
ಕಾರಿನ ಪ್ರಯಾಣವೂ ಸುಖಕರವಲ್ಲಯ್ಯಾ
ಬಸ್ಸಿನ ಪ್ರಯಾಣ ಸುಖಕರವೆನ್ನುವರು
ಬಸ್ಸಿನ ಪ್ರಯಾಣವೂ ಸುಖಕರವಲ್ಲವಯ್ಯಾ
ರೈಲಿನ ಪ್ರಯಾಣ ಸುಖಕರವೆನ್ನುವರು
ರೈಲಿನ ಪ್ರಯಾಣವೂ ಸುಖಕರವಲ್ಲಯ್ಯಾ
ವಿಮಾನದ ಪ್ರಯಾಣ ಸುಖಕರವೆನ್ನುವರು
ವಿಮಾನದ ಪ್ರಯಾಣವೂ ಸುಖಕರವಲ್ಲಯ್ಯಾ
ಇವು ಮನುಜನಿಗೆ ವಿಧಿಯಿಕ್ಕಿದ ಪಯಣವಯ್ಯಾ
ಯಾವ ಪ್ರಯಾಣ ಸುಖಕರವೆನ್ನುವರಯ್ಯಾ ?
ಯಾವ ಪ್ರಯಾಣವೂ ಸುಖಕರವಲ್ಲಯ್ಯಾ ...?
ಚಾಲಕರೆಲ್ಲರಾಚಾಲಕನಾದಾ ತಂದೆ ಬಂಟನಹಳ್ಳಿ ಶ್ರೀ
ಬಸವೇಶ್ವರನ ಶಾಂತ ಚಿತ್ತದಿ ನೆನೆಯುವ ಪಯಣವು ಸುಖಕರವಯ್ಯಾ.೧೭
ಕೊಟ್ಟೇಶಪ್ಪ ಕೆ ಎ
ಕನ್ನಡ ಶಿಕ್ಷಕರು ಸ.ಪ್ರೌ.ಶಾ .
ಎಂ,ತುಂಬರಗುದ್ದಿ.ಸಂಡೂರು ತಾ
ಮೊ ನಂ ೮೯೭೦೧೩೨೦೭೭
ಅತಿಯಾಸೆ ಪಡುವಲ್ಲಿ
ಕುರುಡಾಗುವುದು ಲೇಸುಕಾಣಯ್ಯಾ
ಚಾಡಿ ಮಾತು ಕೇಳುವಲ್ಲಿ
ಕಿವುಡಾಗುವುದು ಲೇಸುಕಾಣಯ್ಯಾ
ಅನ್ಯರ ಹಂಗಿಸುವಲ್ಲಿ
ಮೂಕನಾಗುವುದೇ ಲೇಸುಕಾಣಯ್ಯಾ
ಹೀನ ಕೃತ್ಯ ಮಾಡುವಲ್ಲಿ
ಹೆಳವನಾಗುವುದೇ ಲೇಸುಕಾಣಯ್ಯಾ
ಬಂಟನಹಳ್ಳಿ ಶ್ರೀ ಬಸವೇಶ್ವರಾ
ಎನ್ನ ಕಾಯ ನಿನ್ನದಾದಲ್ಲಿ ಕಾಯಂಗಳನ್ನು ನೀನೇ ಕಾಯೋ ತಂದೆ ೧
ಮನುಜನ ಮಾತುಗಳಾ ಪ್ರಾಣಿಗಳರಿವವು
ಪ್ರಾಣಿಗಳ ಮಾತಾ ಮನುಜನರಿವನೆ ?
ಮನುಜನ ಮಾತುಗಳಾ ಪಕ್ಷಿಗಳರಿವವು
ಪಕ್ಷಿಗಳ ಮಾತಾ ಮನುಜನರಿವನೆ ?
ಮನುಜನ ಮಾತುಗಳಾ ಜಡ ಚೈತನ್ಯಗಳರಿವವೆಂಬರು
ಜಡ ಚೈತನ್ಯಗಳ ಮಾತಾ ಮನುಜನರಿವನೆ ?
ಎಲ್ಲರಲ್ಲಿ ನಾ ಬುದ್ಧಿವಂತನೆಂಬುದು ನಗೆಗಡಲು
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ಪ್ರಾಣಿ ಪಕ್ಷಿ
ಜಡ ಚೈತನ್ಯಗಳ ಮಾತನರಿತಳಿಯದೆ ಬಾಳುವಂತೆ ದಯಮಾಡೋ. ೨
ದೇಹಸಾಮ್ರಾಜ್ಯಕ್ಕೆ ದೊರೆ,'ಮನಸ್ಸು 'ಕೇಳಿ ರಯ್ಯ
ಆ ದೇಹಸಾಮ್ರಾಜ್ಯಕ್ಕೆ ನವದ್ವಾರಗಳಯ್ಯ
ಆ ದೊರೆಗೆ ಪಂಚದಂಡಾದೀಶ್ವರಯ್ಯಾ
ಅಂತರ್ಚಕ್ಷುವೆಂಬ ಮಂತ್ರಿಯ ಸುಸಲಹೆಯಿರಲು
ಅದ ವರ್ಜಿಸಿ,ಷಟ್ಕುದುರೆಗಳೇರಿ,ಆ ದೊರೆಯ ವಿಕೃತದಾಟದ ಪರಿಯಲಿ
ನವ ದ್ವಾರದಿ ರೋಗವೆಂಬ ಶತ್ರುಗಳು ದಂಡೆತ್ತಿಬರುತ್ತಿರಲು
ಪಂಚ ದಂಡಾದೀಶ್ವರರು ದಂಡವಯ್ಯಾಗ
ಮೂಳೆ ಮಾಂಸದ ಕೋಟೆ ಜರ್ಝರಿತವಾಗಿ
ಬಿಳಿ ರಕ್ತದ ಸೈನಿಕರು ಹತರಾಗಿ,
ದೇಹಸಾಮ್ರಾಜ್ಯದಿಂದ ದೊರೆಯು ಆತ್ಮರಾಜಧಾನಿ ರಕ್ಷಣೆಗಾಗಿ ಅಲ್ಲಿ ಇಲ್ಲಿ ಬೇಡುತ್ತಿರಲು, ಬೇಡಿ ಬೇಡಿ, ಸೋತು ಪ್ರಾಣ ಹತ್ಯೆಯಾಗುವ ಮುನ್ನ ತಂದೆ ಭಂಟನಳ್ಳಿ ಶ್ರೀ ಬಸವೇಶ್ವರಾ ನೀನೆತ್ತಿ ನಿಜದರಿವು ಮೂಡಿಸಾ. ೩
ನಾನೊಬ್ಬ ಶಿಕ್ಷಕ,ಪವಿತ್ರವೃತ್ತಿಯಲ್ಲಿರುವನಯ್ಯಾ
ಸರಿಯಾದ ವೇಳೆಗೆ ಶಾಲೆಯಲ್ಲಿರುವೆನಯ್ಯಾ
ವಿಶೇಷ ತರಗತಿಯ ತೆಗೆದುಕೊಳ್ಳುವೆನಯ್ಯಾ
ಓದಿನ ಮನೆಯಲಿಯೂ ಓದಿಸುವೆನಯ್ಯಾ
ಪಠ್ಯವ ಮುಗಿಸಿ ಪುನರಾವರ್ತನೆ ಮಾಡುವೆನಯ್ಯಾ
ಕಲಿಯ ಖಾತ್ರಿಯ ಮಕ್ಕಳಿಂದ ಪಡೆಯುವೆನಯ್ಯಾ
ಮಕ್ಕಳ ಸುರಕ್ಷತೆ ,ಕಲಿಕೆಗಾದ್ಯತೆ ನೀಡುವೆನಯ್ಯಾ
ಮಕ್ಕಳ ಸಂತಸ ಕಲಿಕೆಯಲಿ ಶಿಕ್ಷೆಯ ಮರೆತಿರುವೆನಯ್ಯಾ
ಪಠ್ಯೇತರ,ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಥಾನವ ಕಲ್ಪಿಸುವೆನಯ್ಯಾ
ನಾಡು ನುಡಿ,ದೇಶಾಭಿಮಾನವ ಬಿತ್ತುವೆನಯ್ಯಾ
ಸಾಮಾಜಿಕ ಮೌಲ್ಯ ,ಆಧ್ಯಾತ್ಮಿಕತೆಗಿಂಬಿಡುವೆನಯ್ಯಾ
ಪರೀಕ್ಷೆ ,ಮೌಲ್ಯಮಾಪನ ಕಾರ್ಯವ ಮುಗಿಸುವೆನಯ್ಯಾ
ತರಬೇತಿ ,ಚುನಾವಣಾ ಕರ್ತವ್ಯಕ್ಕೆ ಹಾಜರಾಗುವೆನಯ್ಯಾ
ಇಂತಿ ಹಲವು ಶೈಕ್ಷಣಿಕ ಚುಟುವಟಿಕೆಗೆ ಕುಂದುಂಟಾಗದೆ ನಡೆವೆನಯ್ಯಾ
ಬಯಸಿದ ಸ್ಥಳಕೆ ವರ್ಗಾವಣೆ ಕಲ್ಪಿಸು ದೇವಾ !
ಕಲ್ಪಿಸಿದೆಡೆಯೂ ಕುಂದುಂಟಾದರೆ
ಎನ್ನ ವೃತ್ತಿಯ ಬುತ್ತಿಯನು ನಿನ್ನದಾಗಿಸಿಕೊ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
೪
ಮುನಿವ ಮುಖಕ್ಕಿಂತ
ಮುದ್ದು ಮುಖವು ಲೇಸಯ್ಯಾ
ಮುನಿಯುವ ಮುಖಕ್ಕೆ
ಸಂಬಂಧಗಳನ್ನು ಗಳಿಸಲಾಗದಯ್ಯಾ
ಮುದ್ದು ಮುಖಕ್ಕಿರುವ
ಸಂಬಂಧಗಳನು ಎಣಿಸಲಾಗದಯ್ಯ
ಮುನಿಯುವ ಮುಖವ ಮೆರೆಸದಿರಾ
ಮುದ್ದು ಮುಖ ಮರೆಸದಿರಾ
ಮುನಿಯುವ ಮುಖಕ್ಕೆ
ಮುದ್ದು ಮುಖವನೇ ಮದ್ದಾಗಿಸಯ್ಯಾ
ಎನ್ನ ಮುಖದಲಿ ಮುನಿವೆಂದೂ ನೀ ತೋರದಿರಾ,
ನಾ ತೋರಿದರೆ ಆ ಮುಖವನೊಯ್ದ
ಮೋರಿಯೊಳಗಿಕ್ಕಾತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
೫
ಅಹಂ ಪಡುವ ದೊಡ್ಡವರಿಗಿಂತ
ಅಹಂ ಪಡದ ದಡ್ಡನನ್ನಾಗಿಸಯ್ಯ
ಕೇಳಿಯೂ ಕೊಡದ ಶ್ರೀಮಂತರಿಗಿಂತ
ಕೇಳದೆ ಕೊಡುವ ಬಡವನನ್ನಾಗಿಸಯ್ಯಾ
ಉದ್ಧರಿಯವನಾಗುವುದಕ್ಕಿಂತ
ಉದ್ಧರಿಸುವನಾಗಿಸಯ್ಯಾ
ಉದ್ದವಾಗಿ ಬೆಳೆಯುವುದಕ್ಕಿಂತ ಉದಾರಿಯಾಗಿ ಬೆಳೆಸಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೬
ದೃಷ್ಟಿಯ ಹರಿಸಯ್ಯಾ ಒಳಿತಿನ ಕಡೆಗೆ
ಕೆಟ್ಟದ್ದನ್ನು ನೋಡುವ ಮುನ್ನ
ನುಡಿಯ ನುಡಿಸಯ್ಯ ಶುಭ ನುಡಿಯೆಡೆಗೆ
ಅಶುಭ ನುಡಿಯ ನುಡಿಯುವ ಮುನ್ನ
ಮನಸ ನಿಲ್ಲಿಸಯ್ಯಾ ಏಕಾಗ್ರತೆಯೆಡೆಗೆ
ಚಂಚಲತೆಗೊಳಗಾಗುವ ಮುನ್ನ
ಪ್ರಯತ್ನ ಮಾಡಿಸಯ್ಯಾ ಗೆಲುವಿನ ಕಡೆಗೆ
ಸೋಲನನುಭವಿಸುವ ಮುನ್ನ
ಮುಕ್ತಿ ಕರುಣಿಸಯ್ಯಾ ನಿನ್ನ ಕೈಲಾಸ ಗಿರಿಯೆಡೆಗೆ
ಅನ್ಯರಿಗೆ ಹಂಗಾಗುವ ಮುನ್ನ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೭
ನೆರಳ ಕೊಡುವ ಮರಗಳ ಹೆಚ್ಚು
ಕಡಿವರಯ್ಯಾ ದುರಾಸೆಗಾಗಿ
ಫಲವ ನೀಡಿವ ಹೊಲವ ಉತ್ತದೆ ಹೆಚ್ಚು
ಬಿಡುವರಯ್ಯಾ ನಿವೇಶನಕ್ಕಾಗಿ
ಮನೆಗಳ ಮೇಲೆ ಮನೆಗಳ ಹೆಚ್ಚು ಕಟ್ಟಿಸುವರಯ್ಯಾ
ಹಣದ ವ್ಯಾಮೋಹಕ್ಕಾಗಿ
ಮನಸ್ಸಿಲ್ಲದಾ ಮನಸ್ಸಿನಲಿ ನಿನ್ನ ಪೂಜಿಸುವನಯ್ಯಾ
ನನ್ನ ಸ್ವಾರ್ಥಕ್ಕಾಗಿ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ಈ ನನ್ನ ಮನದ ದುರಾಸೆಯಳಿಸಿ ನೀನಾಧೀನಗೊಳಿಸಯ್ಯಾ. ೮
ಬಗ್ಗಿ ಎದ್ದು ಕೆಲಸ ಮಾಡರು
ಸ್ವಲ್ಪದೂರ ನಡೆಯಲೊಲ್ಲರು
ರೋಗ ರುಜಿನಿಯು ಬೇಡವೆಂಬರು
ದಾನ ಧರ್ಮ ಕೆಲಸ ನಮಗೇಕೆಂಬರು
ಧನ ಕನಕಾದಿಗಳೆಮಗೆಮೆಂಬರು
ಕಷ್ಟಪಟ್ಟು ದುಡಿದು ತಿನ್ನುದ ಮರೆತರು
ಇಷ್ಟಪಟ್ಟಿದ್ದು ಬೇಕೇಬೇಕೆಂಬರು
ತಂದೆ ಬಂಟನಳ್ಳಿ ಶ್ರೀ ಬಸವೇಶ್ವರಾ
ನಿನ್ನ ಸನ್ನಿಧಾನಕ್ಕೆರಗದೆ ಸಂತಸ ನಿಧಿಯ ಕೇಳುವವರನೇನೆಂಬೆ ಹೇಳಾ ೯
ಬೀಗುತ ಬಾಳುವುದಕ್ಕಿಂತ
ಬಾಗುತ ಬಾಳುವುದನು ಕಲಿಸಯ್ಯಾ
ಬೇಡುತ ಬದುಕುವುದಕ್ಕಿಂತ
ಮಾಡುತ ಬದುಕುವುದನು ಬಲಿಸಯ್ಯಾ
ಅನ್ಯಾಯಗಳನು ನೋಡುವುದಕ್ಕಿಂತ
ತಿದ್ದುತ ಹೋಗುವುದನು ಅನುಕೂಲಿಸಯ್ಯಾ
ದೌರ್ಜನ್ಯಗಳನು ಕಾಣುವುದಕ್ಕಿಂತ
ತಡೆಗಟ್ಟುವುದನು ದಯಪಾಲಿಸಯ್ಯಾ
ಭ್ರಷ್ಟಾಚಾರವ ಮಾಡುವುದಕ್ಕಿಂತ
ನಿರ್ಮೂಲನೆ ಮಾಡುವುದ ಬೆಳಸಯ್ಯಾ
ಇಂತಿ ಹಲವು ಮಾಡಲು ಗಟ್ಟಿತನವ ಕರುಣಿಸಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ. ೧೦
ದುಡಿಮೆಗೆ ಸಮಯ ಮೀಸಲಿಡುವರಯ್ಯಾ
ಜೂಜಿಗೂ ಸಮಯ ಮೀಸಲಿಡುವರಯ್ಯಾ
ಮೋಜು ಮಸ್ತಿಗೆ ಸಮಯ ಮೀಸಲಿಡುವರಯ್ಯಾ
ಹುಟ್ಟು ಹಬ್ಬ,ಹರಿದಿನಕ್ಕೂ ಸಮಯಮೀಸಲಿಡುವರಯ್ಯಾ
ವಿರಾಮವಿರುವುದಕ್ಕೂ ಸಮಯ ಮೀಸಲಿಡುವರಯ್ಯ
ದುಷ್ಕೃತ್ಯಕಾರ್ಯಗಳಿಗೂ ಸಮಯ ಮೀಸಲಿಡುವರಯ್ಯ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರ 'ಆರೋಗ್ಯ ವೃದ್ಧಿ'ಗೆ ಯೋಗ ಧ್ಯಾನದಿ ನಿನ್ನ ನೆನೆಯಲು ಸಮಯ ಮೀಸಲಿಡುವವರತಿ ವಿರಳ ನೋಡಾ. ೧೧
ಊರು ಊರಿನವರೆಲ್ಲರೂ ಸೇರಿ
ಕುಳಿತು ಸಿನಿಮಾ ನೋಡುತ್ತಿದ್ದರಯ್ಯಾ
ಚಿತ್ರಮಂದಿರದಲ್ಲಿ
ಮೊದಮೊದಲು !
ಮನೆ ಮನೆಯವರೆಲ್ಲ ಸೇರಿ
ಕುಳಿತು ಸಿನಿಮಾ ಧಾರಾವಾಹಿ
ನೋಡುತ್ತಿರುವರಯ್ಯಾ ದೂರದರ್ಶನದಲ್ಲಿ
ಆ ಮೊದಲು !
ಒಬ್ಬೊಬ್ಬರೇ ಕುಳಿತು ಸಿನಿಮಾ ಧಾರಾವಾಹಿ ಯೂಟ್ಯೂಬ್ ಫೇಸ್ ಬುಕ್, ಶೆರ್ಚಾಟ್,ಟಿಕ್ ಟಾಕ್,ಇತ್ಯಾದಿ ಇತ್ಯಾದಿ ನೋಡುತ್ತಿರುವರಯ್ಯಾ ಮೊಬೆಲ್ ನಲ್ಲಿ
ಈಗೀಗ !
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
ಜಗದ ಮುಂದಿನ ಕಾಲದ ಕಟ್ಟಳೆಯನರುಹಾ
ಇಂದು !! ೧೨
ಎಲ್ಲರೂ ಹೇಳುವರಯ್ಯಾ
"ಇಲ್ಲಿರುವುದು ಸುಮ್ಮನೆ
ಅಲ್ಲಿರುವುದು ನಮ್ಮನೆ"
ಆ ಮನೆ ನೋಡಿರುವರಾರು ? ಆ ಮನೆಗೆ ಹೋಗಿಬಂದವರಾರೆಂದಡೆ ?
ಕಥೆಯ ಹೇಳುವರಯ್ಯಾ
ಇಲ್ಲಿ ಇರದವನಲ್ಲಿರುವನೇ
ಅಲ್ಲಿರುವವನು ಮತ್ತೆಲ್ಲಿಗೆ ಹೋಗುವನು ಹೇಳಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ೧೩
ವಚನಗಳೆಂದರೆ ನೆನೆಯುವುದೆನ್ನ ಮನವು
ಬಸವಣ್ಣನನ್ನಾದಿಯಾಗಿ,
ಕೀರ್ತನೆಗಳೆಂದರೆ ನೆನೆಯುವುದೆನ್ನ ಮನವು
ಕನಕದಾಸರಾದಿಯಾಗಿ,
ತ್ರಿಪದಿಗಳೆಂದರೆ ನೆನೆಯುವುದೆನ್ನ ಮನವು
ಸರ್ವಜ್ಞ ನನ್ನ ಆದಿಯಾಗಿ,
ದೈವವೆಂದರೆ ನೆನೆಯುವುದೆನ್ನ ಮನವು
ನಿನ್ನನಾದಿಯಾಗಿ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ
ಎಲ್ಲದನು ನೆನೆಯುವ, , ಎಲ್ಲರೊಂದಿಗೆ ಜೀವನ ನಡೆಸುವ,ಎಲ್ಲರೂ ನೆನೆಯುವ, ವರವ ಕರುಣಿಸೋ ೧೪
ಎಲೆಗಳಿಗುಂಟು ಹಸಿರು ನೋಡಯ್ಯಾ
ಹೆಣ್ಣಿಗುಂಟು ಬಸಿರು ಕೇಳಯ್ಯಾ
ಜೀವಿಗಳಿಗುಂಟು ಉಸಿರು ತಿಳಿಯಯ್ಯಾ
ಪ್ರತಿ ವಸ್ತುವಿಗುಂಟು ಹೆಸರು
ಇವುಗಳಿರುವ ತನಕ ಜಗದಾಟನಿಲ್ಲದು ಕಾಣಾ,
ಜಗದ್ಸೂತ್ರಧಾರಿ ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ ರಕ್ಷಿಸೋ ಜಗವನನವರತ. ೧೫
ಡಾಕ್ಟರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು !
ಇಂಜಿನಿಯರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು !
ಕೊನೆಗೆ ಸರ್ಕಾರಿ ನೌಕರನಾಗಲೆಂದು ಮಕ್ಕಳನು
ಓದಿಸುವರು ಲಕ್ಷ ಲಕ್ಷ ಜನರು
ಜನಸೇವೆಯೇ ಜನಾರ್ದನ ಸೇವೆಂದು
ಸಮಾಜ ಸೇವಕನಾಗೆಂದು ಮಕ್ಕಳನು
ಓದಿಸುವರೊಬ್ಬರನೂ ಕಾಣೆನಯ್ಯಾ
ತಂದೆ ಬಂಟನಹಳ್ಳಿ ಶ್ರೀ ಬಸವೇಶ್ವರಾ.೧೬
ಕಾರಿನ ಪ್ರಯಾಣ ಸುಖಕರವೆನ್ನುವರು
ಕಾರಿನ ಪ್ರಯಾಣವೂ ಸುಖಕರವಲ್ಲಯ್ಯಾ
ಬಸ್ಸಿನ ಪ್ರಯಾಣ ಸುಖಕರವೆನ್ನುವರು
ಬಸ್ಸಿನ ಪ್ರಯಾಣವೂ ಸುಖಕರವಲ್ಲವಯ್ಯಾ
ರೈಲಿನ ಪ್ರಯಾಣ ಸುಖಕರವೆನ್ನುವರು
ರೈಲಿನ ಪ್ರಯಾಣವೂ ಸುಖಕರವಲ್ಲಯ್ಯಾ
ವಿಮಾನದ ಪ್ರಯಾಣ ಸುಖಕರವೆನ್ನುವರು
ವಿಮಾನದ ಪ್ರಯಾಣವೂ ಸುಖಕರವಲ್ಲಯ್ಯಾ
ಇವು ಮನುಜನಿಗೆ ವಿಧಿಯಿಕ್ಕಿದ ಪಯಣವಯ್ಯಾ
ಯಾವ ಪ್ರಯಾಣ ಸುಖಕರವೆನ್ನುವರಯ್ಯಾ ?
ಯಾವ ಪ್ರಯಾಣವೂ ಸುಖಕರವಲ್ಲಯ್ಯಾ ...?
ಚಾಲಕರೆಲ್ಲರಾಚಾಲಕನಾದಾ ತಂದೆ ಬಂಟನಹಳ್ಳಿ ಶ್ರೀ
ಬಸವೇಶ್ವರನ ಶಾಂತ ಚಿತ್ತದಿ ನೆನೆಯುವ ಪಯಣವು ಸುಖಕರವಯ್ಯಾ.೧೭
ಕೊಟ್ಟೇಶಪ್ಪ ಕೆ ಎ
ಕನ್ನಡ ಶಿಕ್ಷಕರು ಸ.ಪ್ರೌ.ಶಾ .
ಎಂ,ತುಂಬರಗುದ್ದಿ.ಸಂಡೂರು ತಾ
ಮೊ ನಂ ೮೯೭೦೧೩೨೦೭೭
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ