ದೇಶಭಕ್ತಿ ಗೀತೆ
💐ಭಾರತ ಮಾತೆಯ ಮಡಿಲಿನ ಮಕ್ಕಳು💐
ಭಾರತ ಮಾತೆಯ ಮಡಿಲಿನ ಮಕ್ಕಳು ನಾವು,
ಭೇದವ ತೋರದೆ ನಡೆಯುವೆವು ಒಂದೇ ನಾವೆಂದು, ॥ಪಲ್ಲವಿ॥
ಭಾರತಮಾತೆಯ ಮಡಿಲೆಮಗೆ ಸ್ವರ್ಗವು,
ಭಾರತ ಮಾತೆಯ ನುಡಿಯೆಮಗೆ ಅಮೃತವು,
ಭಾರತ ದೇವಿಯ ಜಲವೆಮಗೆ ತೀರ್ಥವು,0
ಭಾರತ ಮಾತೆಯ ನೆಲವೆಮಗೆ ದೇವಾಲಯವು,
ಭಾರತ ಮಾತೆ ಭಾರತಾಂಬೆಯೇ ನಮ್ಮ ದೇವತೆಯು.
ಭಾರತದ ರಾಜಮನೆತನಗಳೆಮಗೆ ಭವ್ಯದಾಸ್ತಿವು,
ಭಾರತದ ರಾಜರಾಜರುಗಳೆಮಗೆ ದಿವ್ಯದಾಶಕ್ತಿವು,
ಕಲೆವಾಸ್ತುಶಿಲ್ಪ ಸಂಗೀತಸಾರುವ ದೇವಾಲಯಗಳೆಮ್ಮಯ ಸಂಸ್ಕೃತಿವು,
ಭಾರತ ಕುಲಕೋಟಿ ಕವಿಗಣವೆಮಗೆ ಸಾಹಿತ್ಯ ಸಂತತಿಯು,
ಭಾರತ ಪಾವನ ನೆಲದಿ ಹರಿಯುವ ನದಿಗಳೆಮ್ಮಯ ಜೀವನವು,
ಬಿತ್ತರವಾಗಿ ಹಬ್ಬಿರುವ ಅಭಯಾರಣ್ಯಗಳೆಮ್ಮಯ ಧನಕನಕವು,
ಧುಮ್ಮಿಕ್ಕಿ ಹರಿಯುವ ಜಲಪಾತಗಳೆಯ ಸಂಜೀವಿನಿಯು,
ಖಗಮೃಗ ಬನ ನಗಾಳಿಯೆಮ್ಮಯ ಸಿರಿಸಂಪತ್ತು
ಭಾರತ ನಾಡನು ಧ್ಧರಿಸಿದ ನಾಯಕರೆಲ್ಲರೆಮ್ಮೆಯ ಮಾರ್ಗದಾತರು,
ಭಾರತದ ನುಡಿ ಗೋಷ್ಠಿ ಸಮ್ಮೇಳನ ಸಭೆಗಳೆ ಮ್ಮಯ ಹಬ್ಬಗಳು,
ಪ್ರಶಸ್ತಿ-ಪುರಸ್ಕಾರ ಪ್ರಶಂಸೆಗಳೆಮ್ಮಯ ಗೌರವಾದರಗಳು,
ಭಾರತೀಯರೆಲ್ಲರಾ ವೀರ ಭಾರತಾಂಬೆಯ ಪ್ರೀಯಪುತ್ರರು.
ಇವರಿಂದ
ಕೊಟ್ರೇಶಪ್ಪ ಕೆ ಎ
ಮೊ:8970131077
ಕನ್ನಡ ಶಿಕ್ಷಕರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ