" ಹರಿಶ್ಚಂದ್ರ ಕಾವ್ಯ "
_____________
ಪುಸ್ತಕ ಅವಲೋಕನ
ಹರಿಶ್ಚಂದ್ರ ಕಾವ್ಯವು ಕಥಾನಿರೂಪಣೆ ಮತ್ತು ವರ್ಣನೆಗಳ ಸಮನ್ವಯದಿಂದ ಶ್ರೇಷ್ಠ ಕಾವ್ಯ ಎನಿಸಿದೆ ಹಾಡುಗಬ್ಬ ದಲ್ಲಿ ಕಾವ್ಯವನ್ನೇ ರಚಿಸಿದ ಕೀರ್ತಿ ರಾಘವಾಂಕ ರಿಗೆ ಸಲ್ಲುತ್ತದೆ ರಾಘವಾಂಕನ ಸೃಜನ ಶಕ್ತಿ ಈ ಕಾವ್ಯದಲ್ಲಿ ಹೊರಹೊಮ್ಮಿದೆ ಕನ್ನಡದ ವಿಶಿಷ್ಟ ಕಾವ್ಯಗಳ ಸಾಲಿನಲ್ಲಿ ಹರಿಶ್ಚಂದ್ರ ಕಾವ್ಯವು ಒಂದು ಹರಿಶ್ಚಂದ್ರ ಕಾವ್ಯ ರಾಘವಾಂಕನ ಬಹುದೊಡ್ಡ ಸಾಧನೆ ಆತನ ಮತೀಯವಾದ ಸಮಾಚಾರ ನಿಷ್ಠೆಗೆ ಹೊರತಾದುದು ಭಾರತೀಯ ಸಾಹಿತ್ಯದಲ್ಲಿಯೇ ಯಾವುದೇ ಭಾಷೆಯಲ್ಲಿ ರಿಚ್ಚಿ ಹರಿಶ್ಚಂದ್ರನ ಕತೆ ಮಹಾ ಕಾಳು ರೂಪದಲ್ಲಿ ಬಂದಿಲ್ಲವೆಂಬುದು ವಿದ್ವಾಂಸರು ಹೇಳುತ್ತಾರೆ ಎಂಬ ಅಭಿಪ್ರಾಯವೂ ಹರಿಶ್ಚಂದ್ರ ಕಾವ್ಯದ ಮಹತ್ವವನ್ನು ಎತ್ತಿ ಹಿಡಿಯುತ್ತದೆ ಹಾಗಾಗಿ ಹಾಗಾಗಿ ಈ ಕಾವ್ಯವನ್ನು ಓದುವಂತೆ ನನ್ನನ್ನು ಪ್ರೇರೇಪಿಸಿತು ಹರಿಶ್ಚಂದ್ರ ಕಾವ್ಯವು ವ್ಯಕ್ತಿಯ ಉನ್ನತಿಗೆ ದೌರ್ಬಲ್ಯಗಳ ಜೊತೆಗೆ ಅತಿಮಾನುಷ ವಿಚಾರಗಳನ್ನು ಪ್ರಸ್ತಾಪಿಸುವ ಕಾವ್ಯವಾಗಿದೆ.
ಹರಿಶ್ಚಂದ್ರ ನಂತಹ ಮಾನವನನ್ನು ಇಂದ್ರಲೋಕದ ವಸಿಷ್ಠ ವಿಶ್ವಾಮಿತ್ರರು ತಮ್ಮ ಬದ್ಧತೆಗಳಿಗೆ ಬಳಸಿಕೊಳ್ಳುತ್ತಾರೆ. ವಿಶ್ವಾಮಿತ್ರನ ಕುಲ ತಂತ್ರಗಳೆಲ್ಲ ಸಂಕುಚಿತ ಮನಸ್ಸಿನ ಪ್ರತಿ
ಪ್ರತೀಕದಂತಿದೆ ಮುನಿಗೆ ತಕ್ಕದಾದ ನಡತೆ ಅಲ್ಲವೆಂದು ಕಾವ್ಯವೇ ಸ್ಪಷ್ಟಪಡಿಸುತ್ತದೆ.
ಹರಿಶ್ಚಂದ್ರನಿಗೆ ಸತ್ಯವೆಂಬುದು ಪ್ರಧಾನ ಮತ್ತು ಶ್ರೇಷ್ಠ ಮೌಲ್ಯವಾಗುತ್ತದೆ.ವಿಶ್ವಾಮಿತ್ರ ತನ್ನ ಸ್ಥಿತಿಗೆ ಕಾರಣನೆಂದು ತಿಳಿದರೂ ಅವನ ವಿರುದ್ಧ ಸೊಲ್ಲೆತ್ತುವುದಿಲ್ಲ ಒದಗುವ ಎಲ್ಲ ಸಂಕಟಗಳನ್ನು ತೆರೆದ ಮನಸ್ಸಿನಿಂದಲೇ ಸ್ವೀಕರಿಸುತ್ತಾನೆ.ರಾಘವಾಂಕನಿಗೆ ಹರಿಶ್ಚಂದ್ರ ಕಾವ್ಯದಲ್ಲಿ ತಾನು ಒಪ್ಪಿಕೊಂಡ ಆ ಕಾಲದ ಮೌಲ್ಯಗಳನ್ನು ಪ್ರತಿಪಾದಿಸುವ ತವಕವಿದ್ದಂತೆ ಕಾಣುತ್ತದೆ .ಅಂತಹ ಮೌಲ್ಯಗಳಲ್ಲಿ ಸತ್ಯವೇ ಶ್ರೇಷ್ಠ ಎಂಬುದು ಅವನ ನಿಲುವಾಗಿತ್ತು .ವಿಶ್ವೇಶ್ವರ ಮಹಿಮೆ ಹೇಳುವುದು ರಾಘವಾಂಕನ ಉದ್ದೇಶ ಅಲ್ಲ .ಹರಿಶ್ಚಂದ್ರನ ಬದುಕಿನಲ್ಲಿ ಶಿವ ಅನಿವಾರ್ಯ. ಸತ್ಯದ ಮೂಲಕ ಶಿವನ ದರ್ಶನ ಪಡೆಯುವ ವಿಚಾರ ಈ ಕಾವೇರ ಧೋರಣೆ ಗಳಲ್ಲೊಂದು. ಮನುಷ್ಯರೆಲ್ಲರೂ ಒಂದೇ ಎನ್ನುವ ನೈತಿಕ ಮೌಲ್ಯವು ಹರಿಶ್ಚಂದ್ರ ಕಾವ್ಯದ ಸ್ಥಾನ ಪಡೆದಿದೆ.ಸತ್ಯ ಪಾಲನೆ ಪ್ರಾಮಾಣಿಕತೆ ಮತ್ತು ಬದ್ಧತೆ ಗಳಿರುವ ಯಾರೂ ಬೇಕಾದರೂ ಶಿವದರ್ಶನ ಪಡೆಯಬಹುದೆಂಬ ಪರೋಕ್ಷ ಸಂದೇಶವೂ ಈ ಕಾವ್ಯದಲ್ಲಿದೆ .
ಹರಿಶ್ಚಂದ್ರ ಕಾವ್ಯದ ಮುಖ್ಯ ವಿಚಾರಗಳಲ್ಲಿ ಹೊಲೆತನವೂ ಒಂದು ಹೊಲಯ ಯಾರು ಹೊಲೆತನ ಯಾವುದೆಂಬ ಬಗ್ಗೆ ಸಾಕಷ್ಟು ವಿವರಗಳು ಕಾವ್ಯದಲ್ಲಿದೆ ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳನ್ನು ಉಲ್ಲೇಖಿಸಿದೆ ಇಲ್ಲಿ ಕುರಿತು ಡಾಕ್ಟರ್ ಜಿ ಎಸ್ ಶಿವರುದ್ರಪ್ಪನವರು ಹೀಗೆ ಪ್ರತಿಕ್ರಿಯಿಸಿದ್ದಾರೆ .ಈ ಕಾವ್ಯದಲ್ಲಿ ರಾಘವಾಂಕರ ಮೂರು ರೀತಿಯ ಹೊಲೆಯರನ್ನು ಚಿತ್ರಿಸಿದ್ದಾನೆ. ಹುಟ್ಟಿನಿಂದಲೇ ಹೊಲಯನಾದ ವೀರಬಾಹು, ಎರಡು ,ಋಷಿಯೊಬ್ಬ ತಾಮಸ ಗುಣಗಳಿಂದ ಉದ್ದವೇಯರಾದ ಗಾನ ರಾಣಿಯರು ಮೂರು, ಸತ್ಕುಲಪ್ರಸೂತನಾದರೂ ಅನಿವಾರ್ಯವಾಗಿ ಹೊಲೆಯನಾಗಬೇಕಾಗಿ ಬಂದ
ಹರಿಶ್ಚಂದ್ರ ಇವರಿಗೆಲ್ಲ ಹೊಲೆತನದ ಪಟ್ಟ ಕಟ್ಟಿದ
ವಿಶ್ವಾಮಿತ್ರನ ಮನಸ್ಸು ಹೊಲೆಯಾಗಿತ್ತು ಎಂಬುದು ಇಲ್ಲಿನ ಒಳನೋಟ. ಮುನಿಯೇ ಇಷ್ಟೊಂದು ನೀಚ ಮನಸ್ಸಿನವನಾದರೆ ಮುನಿತನವು ಹೊಲೆತನಕ್ಕಿಂತ ಕೀಳಾಗುತ್ತದೆ .ಆದರೆ ಕಾವ್ಯದಲ್ಲಿ ಹರಿಶ್ಚಂದ್ರನಿಗೆ ಹೊಲೆಯ ಹೊಲೆತನ ಸಾಮಾಜಿಕ ಸ್ತರವನ್ನು ಎತ್ತರಿಸುವ ಉದ್ದೇಶವಿಲ್ಲ
ರಾಘವಾಂಕನ ಕಾವ್ಯ ಕೌಶಲ್ಯವೂ ಹರಿಶ್ಚಂದ್ರ ಕಾವ್ಯದಲ್ಲಿ ಹೆಪ್ಪುಗಟ್ಟಿದೆ .ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಇಷ್ಟೊಂದು ಕಾಡಲು ಕಾರಣಗಳೇನು ರಾಜ್ಯವನ್ನು ತನ್ನವರನ್ನು ಮತ್ತು ತನ್ನನ್ನು ಮಾರಿಕೊಳ್ಳುವ ವಿಚಾರ ಏಕೆ ಬಂತು ಎಂಬ ವಿಚಾರಗಳನ್ನು ಕಾವ್ಯದಲ್ಲಿನ ಅಂಶಗಳು ಸಮರ್ಥಿಸುತ್ತವೆ ಆದರೆ ಕಾವ್ಯದಾಚೆಗಿ ಹೊಳಹುಗಳಿಂದ
ಕೆಲವು ಒಳನೋಟಗಳನ್ನು ತಿಳಿಯಬಹುದು .
ವಿಶ್ವಾಮಿತ್ರನಿಗೆ ವೈಯಕ್ತಿಕವಾಗಿ ಹರಿಶ್ಚಂದ್ರನ ಮೇಲೆ ದ್ವೇಷ ವಿಲ್ಲ.ಇಂದ್ರ ಲೋಕದಲ್ಲಿ ವಸಿಷ್ಠನ ಜೊತೆಗೆ ನಡೆದ ವಾಗ್ವಾದ ಪ್ರತಿಷ್ಠೆಯಾಗಿ ಬಿಡುತ್ತದೆ ವಿಶ್ವಾಮಿತ್ರನ ಮೊದಲ ಉದ್ದೇಶ ವರಿಷ್ಠರನ್ನು ಸೋಲಿಸುವುದು ವಸಿಷ್ಠ ನನ್ನು ನೇರ ವಾಗಿ ಎದುರಿಸಲಾಗದೆ ವಿಶ್ವಾಮಿತ್ರ ಹರಿಶ್ಚಂದ್ರನನ್ನು ಬಳಸಿಕೊಳ್ಳುತ್ತಾನೆ.ಹರಿಶ್ಚಂದ್ರ ಕಾಣುವ ಕನಸು ಕೆಡುಕಿನ ಸಂಕೇತವಾಗುತ್ತದೆ ಹರಿಶ್ಚಂದ್ರ ಕುಲದ ವಿಚಾರಗಳಲ್ಲಿ ತನ್ನ ಕುಲವೇ ಶ್ರೇಷ್ಠವೆಂದು ಪ್ರತಿಪಾದಿಸುವುದು ಮಗನ ಶವಕ್ಕೂ ಆಗ ಕೊಡಲೇಬೇಕೆಂದು ಪಟ್ಟು ಹಿಡಿಯುವುದು ಚಂದ್ರಮತಿಯ ತಲೆಯನ್ನು ಕಡಿಯಲು ಸಿದ್ಧರಾಗುವುದು ಹೇಗೆ ತನ್ನ ನಿಷ್ಠೆಗೆ ಬದ್ಧನಾಗುತ್ತಾನೆ .ಪ್ರತಿಭಟಿಸಲಾರದ ದೌರ್ಬಲ್ಯಕ್ಕೆ ಒಳಗಾಗುತ್ತಾನೆ .ರಾಘವಾಂಕ ಕಾವ್ಯದ ಒಟ್ಟು
ಧ್ವನಿಯಲ್ಲಿ ಹರನೆಂಬುದೇ ಸತ್ಯ ಸತ್ಯವೆಂಬುದು ಹರನು ಎಂಬ ನಿಲುವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾನೆ .
ಈ ಮೇಲಿನ ಅಂಶಗಳಿಂದಾಗಿ ನನ್ನನ್ನು ಯೋಚಿಸುವಂತೆ ಮಾಡಿ ,ನನ್ನ ಮೇಲೆ ಪ್ರಭಾವ ಬೀರಿತೆನ್ನ
ಬಹುದಾಗಿದೆ.
ವರ್ಗ ಕೋಣೆಯಲ್ಲಿ ಉಪಯೋಗ
ಸತ್ಯವೆಂಬ ಜೀವನ ಮೌಲ್ಯವೂ ತರಗತಿಯ ಕೋಣೆಯಲ್ಲಿ ಅತ್ಯಂತ ಉಪಯುಕ್ತ ವಾದುದಾಗಿದೆ ದೇಶದ ಅಭಿವೃದ್ಧಿಯು ವರ್ಗ ಕೋಣೆಯಲ್ಲಿ ನಿರ್ಮಾಣವಾಗುತ್ತದೆ ಎಂಬ ಮಾತು ಅಕ್ಷರ ಸತ್ಯ .ವರ್ಗ ಕೋಣೆಯಲ್ಲಿರುವ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಬಿತ್ತಬೇಕಾಗಿದೆ. ಇಂದು ಜೀವನ ಮೌಲ್ಯಗಳು ಪಳೆಯುಳಿಕೆಗಳಾಗಿವೆ ,ವಸ್ತು ಸಂಗ್ರಹಾಲಯಕ್ಕೆ ಸೇರಿಸಿ ಬಿಟ್ಟಿದ್ದೇವೆ.ಜೀವನಮೌಲ್ಯಗಳಿಗೆ
ಹಿಂದಿರುಗಿ ಎಂಬ ಸಂದೇಶವನ್ನು ಸಾರುವ ಕಾಲ ಬಂದೊದಗಿದೆ .ಬೋಧನೆಯ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ಅಥವಾ ಸೂಕ್ತ ಸಂದರ್ಭದಲ್ಲಿ ಅಥವಾ ವಿರಾಮ ಕಾಲದಲ್ಲಿ ಜೀವನ ಮೌಲ್ಯಗಳನ್ನು ನೀಡುವುದು ಇಂದು ಅಗತ್ಯವೆಂಬುದನ್ನು ಮನಗಾಣಬಹುದಾಗಿದೆ.
ಮಕ್ಕಳಿಗೆ ಕೇವಲ ಜ್ಞಾನವನ್ನು ನೀಡುವುದಷ್ಟೇ ಅಲ್ಲ ಅವರನ್ನು ಸಂಪೂರ್ಣ ಮಾನವರನ್ನಾಗಿ ಮಾಡಬೇಕಾದರೆ ಜೀವನ ಮೌಲ್ಯಗಳಿರಬೇಕು ಅಂತಹ ಜೀವನಮೌಲ್ಯಗಳ
ನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಮೂಡಿಸಬೇಕಾಗಿದೆ
ಏಕೆಂದರೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ನಾಳಿನ ಪ್ರಜೆಗಳು ಭವಿತವ್ಯದ ನಾಯಕರು ಅದಕ್ಕಾಗಿ ಜೀವನ ಮೌಲ್ಯದ ಶಿಕ್ಷಣದ ಅವಶ್ಯಕತೆಯಿದೆ .ಜೀವನ ಮೌಲ್ಯದ ಶಿಕ್ಷಣವು ವ್ಯಕ್ತಿಯನ್ನು ರಾಷ್ಟ್ರವನ್ನು ಸಂರಕ್ಷಿಸಬಲ್ಲುದು ಅಂತಹ ಜೀವನ ಮೌಲ್ಯಗಳಲ್ಲಿ ಸತ್ಯವೊಂದಾಗಿದೆ.ಇದು ಇಂದಿನ, ಹಿಂದಿನ, ಮುಂದಿನ ಕಾಲಕ್ಕಲ್ಲ ಸರ್ವಕಾಲಕ್ಕೂ ತೂಗಬಲ್ಲ ,ಅಳವಡಿಸಲ್ಪಡುವ ಸಾರ್ವಕಾಲಿಕ ಮೌಲ್ಯವಾಗಿದೆ.
ಜೀವನದಲ್ಲಿ ಬರಬಹುದಾದ ಅಡೆತಡೆಗಳು ,
ನೋವುಗಳು ಆಘಾತಗಳು ಅನಿವಾರ್ಯತೆಗಳು ಹರಿಶ್ಚಂದ್ರನಿಗಷ್ಟೇ ಅಲ್ಲ ಯಾರಿಗಾದರೂ ಬರಬಹುದು ಆಗ ಅವುಗಳನ್ನು ಸಹಿಸುವ ಶಕ್ತಿ ,ಸಹನೆ, ಶಾಂತಿ,ಪವನ್ನು ತ್ಯಜಿಸುವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಏನೇ ಬಂದರೂ ಧೈರ್ಯಗುಂದದೆ ಕಾರ್ಯಪ್ರವೃತ್ತರಾಗುವ ಮನೋಭಾವವನ್ನು ಈ ಕಾವ್ಯದಿಂದ ಕಲಿಯಬಹುದು .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ