ಜೀವವು ನಿನ್ನದು....
ಜೀವವೂ ನಿನ್ನದು...
ಜೀವನ ನಿನ್ನದು..
ಜೀವಿಸುವ ಹಕ್ಕು ಮಾತ್ರ ನನ್ನದು.
ನುಡಿಯು ನಿನ್ನದೂ...
ನಡೆಯು ನಿನ್ನದೂ...
ಬೆಸೆಯುವುದು ಮಾತ್ರ ನನ್ನದು
ತನುವು ನಿನ್ನದು .....
ಮನವು ನಿನ್ನದು.....
ನಿಯಂತ್ರಣ ಮಾತ್ರ ನನ್ನದು
ಭಕ್ತಿಯು ನಿನ್ನದು ....
ಶಕ್ತಿಯು ನಿನ್ನದು .....
ಬಳಸುವುದು ಮಾತ್ರ ನನ್ನದು .
ನರಕವು ನಿನ್ನದು ....
ಸ್ವರ್ಗವು ನಿನ್ನದು ....
ಸೇರುವುದು ಮಾತ್ರ ನನ್ನದು
ಸತ್ಯವು ನಿನ್ನದು ....
ಅನಿತ್ಯವೂ ನಿನ್ನದು ....
ಆಯ್ಕೆಯು ಮಾತ್ರ ನನ್ನದು.
ದೈವವು ನಿನ್ನದು .....
ದೆವ್ವವು ನಿನ್ನದು .....
ಪೂಜಿಸುವುದು ಮಾತ್ರ ನನ್ನದು
ಭೌತಿಕವು ನಿನ್ನದು ...
ಬೌದ್ಧಿಕವು ನಿನ್ನದು ...
ಸಮನ್ವತೆಯು ಮಾತ್ರ ನನ್ನದು .
ಬಹುಮಾನವು ನಿನ್ನದು ...
ಅಪಮಾನವು ನಿನ್ನದು ....
ಪಡೆಯುವುದು ಮಾತ್ರ ನನ್ನದು
ಕಾರ್ಯವು ನಿನ್ನದು ...
ಕಾರಣವು ನಿನ್ನದು ...
ನೆಪ ಮಾತ್ರವೇ ನನ್ನದು
ಹುಟ್ಟು ನಿನ್ನದು ...
ಸಾವು ನಿನ್ನದು ...
ಬದುಕುವ ರೀತಿ ಮಾತ್ರ ನನ್ನದು
//ಜೀವವೂ ನಿನ್ನದು ,//
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ