ದೇವರು -ಭಕ್ತರು
~~~~~~~~~~~~
ಮಕ್ಕಳೆ,ಇಲ್ಲದ ದೇವರ
ಹುಡುಕುವುದೆಲ್ಲಿ?
ನೀವೇ ತಿಳಿದು ಕೊಳ್ಳಿರಿಲ್ಲಿ!!
ಶಾಲೆಯೇ ದೇವಾಲಯ
ಶಿಕ್ಷಕರರ್ಚಕರು!
ವಿದ್ಯ ಯೇ ದೇವರು
ಮಕ್ಕಳೆ ನೀವೇ ಸದ್ಭಕ್ತರು!!
ಪಠ್ಯಪುಸ್ತಕಗಳ ದೇವರ ವಿಗ್ರಹಗಳಲಿ
ಲೇಖನಿ ಅಭ್ಯಾಸ ಪುಸ್ತಕಗಳ ಪೂಜಾ ಸಾಮಾಗ್ರಿಗಳಲಿ
ಬೋಧನೆಯ ಮಂತ್ರಗಳುಲಿಯುತಲಿ
ವಿವೇಕದ ಮಾತುಗಳಾರತಿಯಲಿ
ಜ್ಞಾನದ ದೀವಿಗೆ ಬೆಳಗುತಲಿ
ನಿತ್ಯವೂ ನಡೆದಿದೆ ಕರ್ತವ್ಯದ ಪೂಜೆಯಲಿ
ಸೇತುಬಂಧರ್ಚನೆ ಪರಿಹಾರದಭಿಷೇಕದಲಿ
ಘಟಕಗಳ ಕಿರುಪರೀಕ್ಷೆಯ ಹೋಮ ಹವನದಲಿ
ವಿಶೇಷ ತರಗತಿಯ ಪಂಚಾಮೃತದಲಿ
ನಡೆದಿದೆ ಕಲಿಕೆಯಾರಾಧನೆಯು
ಆಲಿಸುವಿಕೆಯ ಮೌನ ಪ್ರಾರ್ಥನೆಯಲಿ
ಮಾತನಾಡುವಿಕೆಯ ಮಂತ್ರೋದ್ಘೋಷಣೆಯಲಿ
ಓದುವಿಕೆಯ ಪರಿಶುದ್ಧ ಭಕ್ತಿಯಲಿ
ಬರವಣಿಗೆಯ ದೇವರ ಪ್ರದಕ್ಷಿಣೆಯಲಿ
ನಡೆದಿದೆ ಸಿದ್ಧತೆ ಪರೀಕ್ಷೆಯಾ ಯಜ್ಞಕೆ
ಮೌಲ್ಯಮಾಪನದಾಮಹಾಮಜ್ಜನದಲಿ
ಫಲಿತಾಂಶ ದಿನವಾಉಪವಾಸದಲಿ
ಫಲಿತಾಂಶದಾಪ್ರಸಾದದಲಿ
ಪ್ರಮಾಣಪತ್ರದಾದೇವರಾನುಗ್ರಹದಲಿ
ಇಂತಿದೆ ನಿಂತಿದೆ ಎಂತಿದೆ ಕಲಿಕೆ ಕಂದ ನೀ ತಿಳಿಯೋ.
~~~~~~~~~~~~
ಮಕ್ಕಳೆ,ಇಲ್ಲದ ದೇವರ
ಹುಡುಕುವುದೆಲ್ಲಿ?
ನೀವೇ ತಿಳಿದು ಕೊಳ್ಳಿರಿಲ್ಲಿ!!
ಶಾಲೆಯೇ ದೇವಾಲಯ
ಶಿಕ್ಷಕರರ್ಚಕರು!
ವಿದ್ಯ ಯೇ ದೇವರು
ಮಕ್ಕಳೆ ನೀವೇ ಸದ್ಭಕ್ತರು!!
ಪಠ್ಯಪುಸ್ತಕಗಳ ದೇವರ ವಿಗ್ರಹಗಳಲಿ
ಲೇಖನಿ ಅಭ್ಯಾಸ ಪುಸ್ತಕಗಳ ಪೂಜಾ ಸಾಮಾಗ್ರಿಗಳಲಿ
ಬೋಧನೆಯ ಮಂತ್ರಗಳುಲಿಯುತಲಿ
ವಿವೇಕದ ಮಾತುಗಳಾರತಿಯಲಿ
ಜ್ಞಾನದ ದೀವಿಗೆ ಬೆಳಗುತಲಿ
ನಿತ್ಯವೂ ನಡೆದಿದೆ ಕರ್ತವ್ಯದ ಪೂಜೆಯಲಿ
ಸೇತುಬಂಧರ್ಚನೆ ಪರಿಹಾರದಭಿಷೇಕದಲಿ
ಘಟಕಗಳ ಕಿರುಪರೀಕ್ಷೆಯ ಹೋಮ ಹವನದಲಿ
ವಿಶೇಷ ತರಗತಿಯ ಪಂಚಾಮೃತದಲಿ
ನಡೆದಿದೆ ಕಲಿಕೆಯಾರಾಧನೆಯು
ಆಲಿಸುವಿಕೆಯ ಮೌನ ಪ್ರಾರ್ಥನೆಯಲಿ
ಮಾತನಾಡುವಿಕೆಯ ಮಂತ್ರೋದ್ಘೋಷಣೆಯಲಿ
ಓದುವಿಕೆಯ ಪರಿಶುದ್ಧ ಭಕ್ತಿಯಲಿ
ಬರವಣಿಗೆಯ ದೇವರ ಪ್ರದಕ್ಷಿಣೆಯಲಿ
ನಡೆದಿದೆ ಸಿದ್ಧತೆ ಪರೀಕ್ಷೆಯಾ ಯಜ್ಞಕೆ
ಮೌಲ್ಯಮಾಪನದಾಮಹಾಮಜ್ಜನದಲಿ
ಫಲಿತಾಂಶ ದಿನವಾಉಪವಾಸದಲಿ
ಫಲಿತಾಂಶದಾಪ್ರಸಾದದಲಿ
ಪ್ರಮಾಣಪತ್ರದಾದೇವರಾನುಗ್ರಹದಲಿ
ಇಂತಿದೆ ನಿಂತಿದೆ ಎಂತಿದೆ ಕಲಿಕೆ ಕಂದ ನೀ ತಿಳಿಯೋ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ