ಮಂಗಳವಾರ, ಜನವರಿ 21, 2020

         ಪ್ರೀತಿ -ರೀತಿ -ನೀತಿ 
    **************:*************************

ಪ್ರೀತಿ ಮಾಡ್ದೆರೆಲ್ಲಾ ರೋಮಿಯೊ ಜೂಲಿಯಟಾಗಲ್ಲ
                         ;ಲೈನಾ ಮಜ್ನು ಅನಿಸಲ್ಲ
ಪ್ರೀತಿ ಮಾಡ್ಬೇಕಂದ್ರೂ ಪ್ರೀತಿನ ಕೊಣ್ಕೋಣೋದಲ್ಲ
                      ; ಪ್ರೀತಿನಾ ಕಳ್ಕಳೋದಲ್ಲ
ಪ್ರೀತಿ ಮಾಡ್ದಿದ್ರೂ ಪ್ರೀತಿ ಜಗತ್ನ ಬಿಟ್ಟಿಲ್ಲ
                ; ಪ್ರೀತಿಯರ್ಥಯಿದಂತ ತುಟಿ ಬಿಚ್ಚಿಲ್ಲ
ಪ್ರೀತಿ ಮಾಡಿದ್ರೂ ಪ್ರೀತಿಯರ್ಥ ಮುಗಿದಿಲ್ಲ
                      ;ಎಂದೂ ಪ್ರೀತಿ ವ್ಯರ್ಥವಾಗಲ್ಲ
ಪ್ರೀತಿ ಬ್ಯಾಡಂದ್ರೂ ಬರದೇ ಬಿಡಲ್ಲ
                ; ಪ್ರೀತಿ ಬೇಕಂದ್ರೂ ಹೋಗದೆ ಸಿಗಲ್ಲ
ಪ್ರೀತಿ ಹುಟ್ಟೋ ಜಾಗ ಯಾರೀಗೂ ತಿಳಿದಿಲ್ಲ
                    ; ಪ್ರೀತಿ ಹುಟ್ಟೋ ಹೊತ್ತು ಗೊತ್ತಿಲ್ಲ
ಪ್ರೀತಿಗಾ ಪ್ರೀತಿಯೇ ಪ್ರೀತಿ ;
                ಪ್ರೀತಿಯಿಲ್ಲದಾ ಜೀವಕ್ಕೆ ಪ್ರೀತಿ ಪಜೀತಿ
ಪ್ರೀತಿ ಬಂದ್ರ ತಡಿಬ್ಯಾಡ ;
                     ಪ್ರೀತಿಯಿಲ್ಲಂದ್ರ ಮುಂದ ನಡಿಬ್ಯಾಡ.

                 ಕೊಟ್ಟೇಶಪ್ಪ ಕೆ ಎ
        ವಚಕನ್ನಡ ಶಿಕ್ಷಕರು  ಸ.ಪ್ರೌ.ಶಾ .
            ಎಂ,ತುಂಬರಗುದ್ದಿ.ಸಂಡೂರು ತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Vidyagama